ಅಗ್ರಿಕೊಲ

 (ಸು. ಕ್ರಿ.ಪೂ. 37 - ಕ್ರಿ.ಶ. 93) ಸಮರ್ಥ ರೋಮನ್ ಸೇನಾಪತಿ, ದಕ್ಷ ಆಡಳಿತಗಾರ. ಕಾರ್ಯರಂಗ ಹೆಚ್ಚಾಗಿ ಬ್ರಿಟನ್. ಕ್ರಿ.ಶ. 77ರಲ್ಲಿ ಕಾನ್ಸಲ್ ಪದವಿಗೇರಿ, ಮುಂದೆ ಬ್ರಿಟನ್ನಿನ ಪ್ರಾಂತಾಧಿಪತಿಯಾದ. ವೇಲ್ಸ್, ಸ್ಕಾಟ್ಲೆಂಡ್ ಮುಂತಾದ ಕಡೆಗಳಲ್ಲಿ ದಂಗೆಯೇಳುತ್ತಿದ್ದವರನ್ನು ಅಡಗಿಸಿ ಬ್ರಿಟನ್ನಿನ ಬಹುಭಾಗವನ್ನು ಹತೋಟಿಗೆ ತಂದ. ಉದಾರ ಹೃದಯಿಯಾದ ಈತ, ತನ್ನ ಪ್ರಾಂತ್ಯದ ಜನರೆಲ್ಲ ಶಾಂತಿ ನೆಮ್ಮದಿಗಳಿಂದ ಬದುಕುವಂತಾಗಬೇಕೆಂಬ ಧ್ಯೇಯದಿಂದ ರೋಮನ್ ಸಂಸ್ಕøತಿಯನ್ನು ಅವರಲ್ಲಿ ಹರಡಲು ಯತ್ನಿಸಿದ. ಇವನ ಆಡಳಿತದಲ್ಲಿ ಸೌಮ್ಯತೆ ಜನಾನುರಾಗಗಳಿದ್ದುವು. ಇವನ ಅಳಿಯ ಟಾಸಿಟಸ್ ಎಂಬ ಪ್ರಸಿದ್ಧ ರೋಮನ್ ಚರಿತ್ರಕಾರ ಇವನ ಜೀವನಚರಿತ್ರೆಯನ್ನು ಬರೆದಿದ್ದಾನೆ. ಇದರಲ್ಲಿ ಆ ಕಾಲದ ರೋಮನರು ಹೊಂದಿದ್ದ ಸದ್ಗುಣಗಳಿಗೆ ತನ್ನ ಮಾವ ಮಾದರಿಯಾಗಿದ್ದ ಎಂದು ಬರೆದಿದ್ದಾನೆ.      

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಎ.ಎಂ.)